ಇತ್ತೀಚಿನ ದಿನಗಳಲ್ಲಿ ತೂಕ ಇಳಿಸೋದೇ ಒಂದು ದೊಡ್ಡ ಸವಾಲಿನ ಕೆಲಸ. ತೂಕ ಹೆಚ್ಚಾಗಿರುವವರು ಬೆಳಗ್ಗೆ ಎದ್ದು ವಾಕಿಂಗ್ ಮಾಡೋದರಿಂದ ಹಿಡಿದು ಸಂಜೆ ಮಲಗುವವರೆಗೂ ಡಯಟ್ ಪ್ಲಾನ್ ಬಗ್ಗೆಯೇ ಯೋಚಿಸುತ್ತಾರೆ. ಇದರ ಜೊತೆಗೆ ಮಾರುಕಟ್ಟೆಯಲ್ಲಿ ತೂಕ ಇಳಿಸಲೆಂದೇ ಸಿಗುವ ಹತ್ತಾರು ಔಷಧಿ ಬಳಸುತ್ತಾರೆ.
ಈಗಂತು ತೂಕ ಇಳಿಸಿಕೊಳ್ಳಲೆಂದೇ ದೊಡ್ಡ ದೊಡ್ಡ ತರಬೇತಿ ಕೇಂದ್ರಗಳು, ಟ್ರೈನರ್, ಯೋಗ, ಜಿಮ್ ಹೀಗೆ ಹತ್ತಾರು ಕಸರತ್ತು ಮಾಡುತ್ತಾರೆ. ಅದರಲ್ಲೂ ಯುವ ಸಮುದಾಯ ಮಾತ್ರ ಈಗ ತೂಕ ಹೆಚ್ಚಳದಿಂದಾಗಿ ಹೊಸ ತಲೆ ನೋವಿಗೆ ಒಳಗಾಗಿದ್ದಾರೆ. ಅವರ ಜೀವನ ಶೈಲಿ, ಆಹಾರ ಕ್ರಮದಿಂದಾಗಿ ತೂಕ ಹೆಚ್ಚಳದಂತಹ ಸಮಸ್ಯೆಗೆ ಒಳಗಾಗಿದ್ದಾರೆ.
ಆದರೆ ತೂಕ ಇಳಿಸಲು ಹತ್ತಾರು ಕ್ರಮ ಮಾಡಿದ್ದರು ವಿಫಲರಾದವರು ಈಗ ಆರ್ಯುವೇದದಲ್ಲಿ ಅತ್ಯುತ್ತಮ ಹಾಗೂ ಸರಳ ಮಾರ್ಗವನ್ನು ಅಳವಡಿಸಿಕೊಂಡರೆ ಸುಲಭವಾಗಿ ತೂಕ ಇಳಿಸಬಹುದು. ಹಾಗಾದ್ರೆ ಆಯುರ್ವೇದದ ಮೂಲಕ ತೂಕ ಇಳಿಸಲು ಮಾಡಬೇಕಾದ ಕೆಲಸವೇನು? ಯಾವ ರೀತಿ ಆಹಾರ ಸೇವಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸುಲಭವಾಗಿ ತೂಕ ಇಳಿಸಲು ಗ್ರೀನ್ ಟೀ ಸುಲಭ ಮಾರ್ಗವಾಗಿದೆ. ಏಕೆಂದರೆ ಗ್ರೀನ್ ಟೀಯಲ್ಲಿರುವ ಕೊಬ್ಬು ಕರಗಿಸುವ ಅಂಶವು ದೇಹದಲ್ಲಿರುವ ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಹೆಚ್ಚುವರಿಯಾಗಿರುವ ಕೊಬ್ಬು ಕರಗುತ್ತದೆ. ಹೀಗಾಗಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಸಕ್ಕರೆ ಟೀ ಬದಲು ಗ್ರೀನ್ ಟೀ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದರೆ ತೂಕ ಇಳಿಸುವುದು ಸುಲಭ.
ದಾಲ್ಚಿನ್ನಿ:
ಬಳಸಿ ದಾಲ್ಚಿನ್ನಿಯನ್ನು ಆಯುರ್ವೇದದಲ್ಲಿ ಔಷಧವಾಗಿ ಬಳಸಲಾಗುತ್ತದೆ. ಯಾರಾದರೂ ತೂಕ ಇಳಿಸಿಕೊಳ್ಳಲು ಬಯಸಿದರೆ ದಾಲ್ಚಿನ್ನಿ ಸೇವಿಸಲು ಪ್ರಾರಂಭಿಸಿ. ಇದನ್ನು ಬಳಸುವುದರಿಂದ, ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಬಹುದು ಮತ್ತು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.
ಅಶ್ವಗಂಧವನ್ನು:
ಅಶ್ವಗಂಧವನ್ನು ಆಯುರ್ವೇದದಲ್ಲಿ ಗಿಡಮೂಲಿಕೆಯಾಗಿ ಬಳಸಲಾಗುತ್ತದೆ. ನೀವು ತೂಕ ಇಳಿಸಿಕೊಳ್ಳಲು ಯೋಜಿಸುತ್ತಿದ್ದರೆ ಅಶ್ವಗಂಧವನ್ನು ಸೇವಿಸಲು ಪ್ರಾರಂಭಿಸಿ. ಇದು ನಿಮ್ಮ ತೂಕ ನಷ್ಟಕ್ಕೆ ಸಹಾಯ ಮಾಡಬಹುದು.
ನೀವು ದಾಸವಾಳದ ಹೂವಿನ ರುಚಿಯನ್ನು ಪ್ರೀತಿಸಿದರೆ ಆಗ ನೀವು ಹೆಚ್ಚು ಸಮಯ ತೆಗೆದುಕೊಳ್ಳದೆ ತೂಕ ಇಳಿಸಿಕೊಳ್ಳುವುದು ಖಂಡಿತ. ಇದರಲ್ಲಿ ನ್ಯೂಟ್ರೀನ್, ಫ್ಲವನಾಯಿಡ್ ಮತ್ತು ಹಲವಾರು ರೀತಿಯ ಖನಿಜಾಂಶಗಳಿವೆ. ಇವೆಲ್ಲವೂ ನಿಮ್ಮ ದೇಹವು ಕೊಬ್ಬು ಮತ್ತು ಕಾರ್ಬೋಹೈಡ್ರೆಟ್ಸ್‌ನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಇದನ್ನು ಯಾವುದೇ ರೀತಿಯಲ್ಲೂ ಸೇವಿಸಬಹುದು.
ದ್ರಾಕ್ಷಿ ಹಣ್ಣಿನ ರಸ:
ದ್ರಾಕ್ಷಿ ಸಹ ಅತ್ಯುತ್ತಮ ಪೋಷಕಾಂಶವನ್ನು ಹೊಂದಿರುವ ನೈಸರ್ಗಿಕ ಉತ್ಪನ್ನಗಳಲ್ಲಿ ಒಂದು ಇದರ ರಸವನ್ನು ಮಲಗುವ ಮುನ್ನ ಸೇವಿಸಿದರೆ ವಿಶೇಷ ಬಗೆಯ ಆರೋಗ್ಯಕರ ಫಲಿತಾಂಶವನ್ನು ನೀಡುವುದು. ಜೊತೆಗೆ ಅನಗತ್ಯವಾದ ದೇಹದ ಬೊಜ್ಜನ್ನು ಬಲು ಸುಲಭವಾಗಿ ಕರಗಿಸುವುದು ಎಂದು ಹೇಳಲಾಗುತ್ತದೆ. ದ್ರಾಕ್ಷಿಯ ಜೊತೆಗೆ ಸ್ವಲ್ಪ ಬಿಸಿ ಮಾಡಿದ ಹಾಲು ಸೇವಿಸಿದರೆ ದೇಹಕ್ಕೂ ಉತ್ತಮವಾಗಿರುತ್ತದೆ.
ಒಂದು ದೊಡ್ಡಲೋಟ ನೀರಿನಲ್ಲಿ ಎರಡು ದೊಡ್ಡ ಚಮಚ ಜೀರಿಗೆಯನ್ನು ಇಡಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಇದನ್ನು ಕುದಿಸಿ ಕೊಂಚ ಹೊತ್ತಿನ ಬಳಿಕ ಸೋಸಿ ಜೀರಿಗೆಯ ಕಾಳುಗಳನ್ನು ನಿವಾರಿಸಿ.ಇನ್ನು ಈ ನೀರಿಗೆ ಅರ್ಧ ಲಿಂಬೆಯ ಹಣ್ಣನ್ನು ಹಿಂಡಿ ರಸವನ್ನು ಸೇರಿಸಿ. ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಮೂರು ಗ್ರಾಂ ಜೀರಿಗೆ ಪುಡಿ ಮತ್ತು ಕೆಲವು ಹನಿ ಜೇನನ್ನು ಸೇರಿಸಿ ಮಿಶ್ರಣ ಮಾಡಿ ಬಳಿಕ ಕುಡಿಯಿರಿ. ಹೀಗೆ ಮಾಡುವುದರಿಂದ ಸುಲಭವಾಗಿ ತೂಕ ಇಳಿಸಬಹುದು.